Dr. Chetan Ganteppanavar
× Home About Dr. Chetan Specializations Services Gallery Blogs FAQs
Contact Us
Every Tuesday Dr. Chetan will be visiting Karthikeya Multispeciality Hospital at Bankapura from 10am - 1pm

ಡಾ ಚೇತನ್ ಕೆ ಗಂಟೆಪ್ಪನವರ ಅವರ ಸಲಹೆ : ಕೀಲು ನೋವನ್ನು ಎಂದಿಗೂ ನಿರ್ಲಕ್ಷಿಸಬೇಡಿ

ಡಾ ಚೇತನ್ ಕೆ ಗಂಟೆಪ್ಪನವರ ಅವರ ಸಲಹೆ : ಕೀಲು ನೋವನ್ನು ಎಂದಿಗೂ ನಿರ್ಲಕ್ಷಿಸಬೇಡಿ

Published
-----------image

ಕೀಲು ನೋವನ್ನು ನಿರ್ಲಕ್ಷಿಸಬೇಡಿ – ಅದು ರೂಮೇಟಾಯ್ಡ್ ಆರ್ಥ್ರೈಟಿಸ್ ಆಗಿರಬಹುದು!

 

ನಮ್ಮ ದೇಶದಲ್ಲಿ ಕೀಲು ನೋವು ತುಂಬಾ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ. ಆದರೆ ಅನೇಕರು ಅದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ವಿಟಮಿನ್ ಕೊರತೆ ಇರಬಹುದು”, “ಚಿಕನ್‌ಗುನ್ಯಾ ಆಗಿರಬಹುದು”, “ಕೆಲಸ ಹೆಚ್ಚು ಮಾಡಿದರಿಂದ ನೋವು ಬಂದಿದೆ”, “ವಯಸ್ಸಾದ ಮೇಲೆ ಇವೆಲ್ಲಾ ಸಹಜ ಎಂದುಕೊಂಡು ತಿಂಗಳುಗಟ್ಟಲೆ, ಕೆಲವೊಮ್ಮೆ ವರ್ಷಗಳವರೆಗೆ ಸಹಿಸಿಕೊಂಡೇ ಇರುತ್ತಾರೆ.

 

ಇತ್ತೀಚೆಗೆ ನನ್ನ ಬಳಿ ಸುಮಾರು 45 ವರ್ಷದ ಒಬ್ಬ ಮಹಿಳೆ ಬಂದಿದ್ದರು. ಅವರಿಗೆ ಹಲವು ವರ್ಷಗಳಿಂದ ಕೈ ಬೆರಳುಗಳು, ಮಣಿಕಟ್ಟು, ಕಾಲಿನ ಕೀಲುಗಳು ಮತ್ತು ಮೊಣಕಾಲುಗಳಲ್ಲಿ ನೋವು ಇತ್ತು. ಬೆಳಿಗ್ಗೆ ಎದ್ದಾಗ ಕೈಗಳನ್ನು ಮುಚ್ಚಲು ಕಷ್ಟವಾಗುತ್ತಿತ್ತು. ಕೆಲವೊಮ್ಮೆ ಕುತ್ತಿಗೆ ನೋವು ಕೂಡ ಇತ್ತು. ಜೊತೆಗೆ ಬೇಗ ದಣಿವು, ಕೂದಲು ಉದುರುವುದು, ಆಗಾಗ ಸಣ್ಣ ಜ್ವರ ಬರುವುದು ಮತ್ತು ರಕ್ತಹೀನತೆ (ಹಿಮೋಗ್ಲೋಬಿನ್ ಕಡಿಮೆ) ಕೂಡ ಇತ್ತು.

ಆದರೆ ಅವರು ಇದನ್ನೆಲ್ಲಾ ಸಾಮಾನ್ಯ ಸಮಸ್ಯೆ ಎಂದುಕೊಂಡಿದ್ದರು. “ನನಗೆ ಹಿಮೋಗ್ಲೋಬಿನ್ ಯಾವಾಗಲೂ ಕಡಿಮೆ ಇರುತ್ತದೆ”, “ಕೆಲಸ ಮಾಡಿದರೆ ದಣಿವಾಗುವುದು ಸಹಜ” ಎಂದು ನಿರ್ಲಕ್ಷಿಸಿದ್ದರು.

ಕಾಲ ಕಳೆದಂತೆ ಅವರ ಕೈ ಬೆರಳುಗಳಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳಲು ಆರಂಭವಾಯಿತು. ಕೆಲವು ಕೀಲುಗಳು ಬಾಗಿದಂತೆ ಕಂಡವು. ಆಗ ಮಾತ್ರ ಅವರು ವೈದ್ಯರನ್ನು ಸಂಪರ್ಕಿಸಿದರು.

 

 

Youtube Link : Video of Hand -- https://www.youtube.com/shorts/smWFBEI-BsY

 

 

 

ಪರಿಶೀಲನೆ ಮಾಡಿದಾಗ ಅವರಿಗೆ ರೂಮೇಟಾಯ್ಡ್ ಆರ್ಥ್ರೈಟಿಸ್ ಎಂಬ ಕಾಯಿಲೆ ಇರುವುದು ತಿಳಿಯಿತು. ಇದು ದೇಹದ ರೋಗನಿರೋಧಕ ವ್ಯವಸ್ಥೆಯೇ ತನ್ನದೇ ಕೀಲುಗಳ ಮೇಲೆ ದಾಳಿ ಮಾಡುವ ಒಂದು ಕಾಯಿಲೆ.

ಅವರು ಬಹಳ ತಡವಾಗಿ ಬಂದಿದ್ದರೂ, ಕಾಯಿಲೆ ಲಕ್ಷಣಗಳು ಸಂಪೂರ್ಣ ಮುಗಿದಿರಲಿಲ್ಲ. ಇನ್ನೂ ಕೀಲುಗಳಲ್ಲಿ ಉರಿ, ಬಿಸಿ ಮತ್ತು ನೋವು ಇತ್ತು. ಅಂದರೆ ಕಾಯಿಲೆಯ ಚಟುವಟಿಕೆ ಇನ್ನೂ ಮುಂದುವರಿಯುತ್ತಿತ್ತು. ಸೂಕ್ತ ಔಷಧಿಗಳನ್ನು ಆರಂಭಿಸಿದ ನಂತರ ಅವರ ನೋವು ಕಡಿಮೆಯಾಯಿತು, ಬೆಳಗಿನ ಬಿಗಿತ ಕಡಿಮೆಯಾಯಿತು ಮತ್ತು ದಿನನಿತ್ಯದ ಕೆಲಸಗಳನ್ನು ಸುಲಭವಾಗಿ ಮಾಡಲು ಸಾಧ್ಯವಾಯಿತು.

ಇಲ್ಲಿ ಮುಖ್ಯವಾದ ವಿಷಯ ಏನೆಂದರೆ, “ಆರ್ಥ್ರೈಟಿಸ್” ಎಂದರೆ ಜೀವನ ಮುಗಿದಂತಲ್ಲ. ಇಂದು ಅನೇಕ ರೀತಿಯ ಕೀಲು ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿವೆ. ಸರಿಯಾದ ಸಮಯದಲ್ಲಿ ರೋಗವನ್ನು ಗುರುತಿಸಿ ಚಿಕಿತ್ಸೆ ಆರಂಭಿಸಿದರೆ ಕೀಲುಗಳ ಹಾನಿಯನ್ನು ಬಹಳ ಮಟ್ಟಿಗೆ ತಡೆಯಬಹುದು.

ನಿಮಗೆ ದೀರ್ಘಕಾಲದ ಕೀಲು ನೋವು, ಬೆಳಿಗ್ಗೆ ಕೀಲುಗಳ ಬಿಗಿತ, ರಕ್ತಹೀನತೆ, ಕೂದಲು ಉದುರುವುದು, ದಣಿವು ಅಥವಾ ಆಗಾಗ ಸಣ್ಣ ಜ್ವರ ಇರುವುದಾದರೆ ಅದನ್ನು ನಿರ್ಲಕ್ಷಿಸಬೇಡಿ. ಅದು ಕೇವಲ ವಿಟಮಿನ್ ಕೊರತೆಯಲ್ಲದೇ, ಯಾವುದಾದರೂ ಕೀಲು ಕಾಯಿಲೆಯ ಸೂಚನೆಯಾಗಿರಬಹುದು.

ಸಮಯಕ್ಕೆ ವೈದ್ಯರನ್ನು ಸಂಪರ್ಕಿಸಿ. ಸರಿಯಾದ ಪರೀಕ್ಷೆ ಮತ್ತು ಚಿಕಿತ್ಸೆಯಿಂದ ಆರೋಗ್ಯಕರ ಜೀವನವನ್ನು ನಡೆಸುವುದು ಸಂಪೂರ್ಣ ಸಾಧ್ಯ.

 

ಕೀಲು ನೋವು, ಕೀಲು ಊತ, ಬೆಳಗಿನ ಬಿಗಿತ, ರಕ್ತಹೀನತೆ ಅಥವಾ ದೀರ್ಘಕಾಲದ ಸಂಧಿ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ಸಮಯಕ್ಕೆ ಸರಿಯಾಗಿ ವೈದ್ಯರನ್ನು ಸಂಪರ್ಕಿಸಿದರೆ ಉತ್ತಮ ಚಿಕಿತ್ಸೆಯಿಂದ ಆರೋಗ್ಯಕರ ಜೀವನ ನಡೆಸುವುದು ಸಾಧ್ಯ.

 

 

Dr Chetan K Ganteppanavar
MBBS, MD (General Medicine)
ವೈದ್ಯರು ಹಾಗೂ ಮಧುಮೇಹ ತಜ್ಞರು
ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್
ಕಾಳಿದಾಸ ನಗರ, ರೈತ ಸೌಧದ ಎದುರು, ಹುಬ್ಬಳ್ಳಿ

 

 

📞 8147148724

 

“ನಿಮ್ಮ ಆರೋಗ್ಯವೇ ನಮ್ಮ ಆದ್ಯತೆ – ಸರಿಯಾದ ರೋಗನಿರ್ಣಯ, ವೈಯಕ್ತಿಕ ಆರೈಕೆ ಮತ್ತು ವಿಶ್ವಾಸಾರ್ಹ ಚಿಕಿತ್ಸೆ.”

Tags : Rheumatoid Arthritis, ,
Emergency