
ಬಂಕಾಪುರದಲ್ಲಿ ಡಾ. ಚೇತನ ಕೆ. ಗಂಟೆಪ್ಪನವರ ನೇತೃತ್ವದಲ್ಲಿ ಹೃದಯ ಹಾಗೂ ಮಧುಮೇಹ ತಪಾಸಣಾ ಶಿಬಿರ.
ಡಾ. ಚೇತನ ಕೆ. ಗಂಟೆಪ್ಪನವರ, (ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್), ಹುಬ್ಬಳ್ಳಿಯ ಪ್ರಮುಖ ವೈದ್ಯರು, ಡಾ. ಬಸವರಾಜ ನರೇಗಲ್ ( ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರು) ಮತ್ತು ಡಾ. ಅರುಣ್ ನರೇಗಲ್ (ಕಾರ್ತಿಕೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್, ಬಂಕಾಪುರ) ಅವರೊಂದಿಗೆ 2025ರ ಆಗಸ್ಟ್ 3 ರಂದು ಬಂಕಾಪುರದಲ್ಲಿ ಭರ್ಜರಿ ಹೃದಯ-ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿದರು.
ಸರಿ ಸುಮಾರು 150 ರಿಂದ 180 ಜನ ಪಾಲ್ಗೊಂಡರು. ವಿಹಾನ್ ಹಾರ್ಟ್ ಕೇರ್, ಹುಬ್ಬಳ್ಳಿ ತಂಡದವರು ಈ ಶಿಬಿರದಲ್ಲಿ ಭಾಗವಹಿಸಿ ECG ಹಾಗೂ ECHO ತಪಾಸಣೆಗಳನ್ನು ನಡೆಸಿದರು.
ಶಿಬಿರದ ಮುಖ್ಯ ಉದ್ದೇಶ ಹೃದಯ ರೋಗ, ರಕ್ತದೊತ್ತಡ ಮತ್ತು ಮಧುಮೇಹ ತಪಾಸಣೆ ಹಾಗೂ ಅರಿವು ಮೂಡಿಸುವಿಕೆ ಆಗಿತ್ತು.
ಶಿಬಿರದಿಂದ ಕಂಡುಬಂದ ಕೆಲವೊಂದು ಸತ್ಯಗಳು:
1. ಕೇವಲ 40ರ ಹರೆಯದವರಲ್ಲಿಯೂ ರಕ್ತದೊತ್ತಡ (ಬಿಪಿ) ಮತ್ತು ಮಧುಮೇಹ ಕಂಡುಬಂತು. ಎಷ್ಟೋ ಚಿಕ್ಕ ವಯಸ್ಸಿನವರು 300mg/dL ವರೆಗೆ ಶುಗರ್ ಹೊಂದಿದ್ದರು. ಅವರಿಗೆ ಯಾವುದೇ ತರಹದ ರೋಗದ ಲಕ್ಷಣಗಳು ಇರಲಿಲ್ಲ. ಮಧುಮೇಹದ ಬಗ್ಗೆ ಅರಿವು ಮೂಡಿಸಿ ಚಿಕಿತ್ಸೆ ಆರಂಭಿಸಲಾಯಿತು.
2. ಆಲೋಪಥಿ ಔಷಧಿಗಳ ಬಗ್ಗೆ ತಪ್ಪು ಕಲ್ಪನೆಗಳು – ಮಾತ್ರೆಗಳು ಒಮ್ಮೆ ಶುರು ಮಾಡಿದರೆ, ಜೀವನ ಪೂರ್ತಿ ಆಗಿ ತಗೊಳ್ಳಬೇಕು, ತುಂಬಾ ದಿನ ಮಾತ್ರೆ ತೆಗೆದುಕೊಂಡರೆ ಕಿಡ್ನಿ ಹಾಗೂ ಮೂತ್ರಪಿಂಡ ಹಾನಿಯಾಗುತ್ತೆ. ಇಲ್ಲಿ ನಾವು ಎಲ್ಲರಿಗೂ ಹೇಳಿದ ವಿಷಯ ಏನೆಂದರೆ, ಸರಿಯಾಗಿ ನಮ್ಮ ಸಕ್ಕರೆ ಮತ್ತು ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳದಿದ್ದರೆ ಕಿಡ್ನಿ ಮೇಲೆ ಪ್ರಭಾವ ಬೀರುತ್ತವೆ ಹೊರತು, ಮಾತ್ರೆಗಳಿಂದ ಅಲ್ಲ. ನಾವು ಸರಿಯಾದ ಡೋಸ್ ಪಡೆಯದೇ ನಮ್ಮ ಸಕ್ಕರೆ ಮಟ್ಟ ಹೆಚ್ಚಿದರೆ, ಅದು ನಮ್ಮ ತಪ್ಪಾಗುತ್ತೆ.
3. ಪ್ರತಿ ತಿಂಗಳ ಔಷಧ ವೆಚ್ಚ ಹೆಚ್ಚೆಂದು ಎಷ್ಟೊಂದು ಜನರು ಚಿಕಿತ್ಸೆ ಇಂದ ವಂಚಿತರಾಗಿರುವರು. ನಾವು ಇಲ್ಲಿ ತಿಳಿಯಬೇಕಾಗಿರುವುದು ಏನೆಂದರೆ ; ಇಂದು ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳದೆ ಇದ್ದರೆ, ಮುಂದೆ ದೊಡ್ಡ ಮೂಲ್ಯ ಕಟ್ಟಬೇಕಾಗಬಹುದು. ಹೃದಯಾಘಾತ, ಕಿಡ್ನಿ ಸಮಸ್ಯೆ, ಡಯಾಲಿಸಿಸ್ ಈ ಥರ ಸಮಸ್ಯೆ ಬಂದರೆ, ನಮ್ಮ ದಿನ ನಿತ್ಯ ವೆಚ್ಚ 5 ರಿಂದ 10 ಪಟ್ಟು ಜಾಸ್ತಿ ಆಗುತ್ತೆ. ಆದ್ದರಿಂದ ಇಂದು ನಾವು ಆರೋಗ್ಯ ಕಾಪಾಡಿಕೊಳ್ಳಬೇಕು.
4. ಮಧುಮೇಹ ತಪಾಸಣೆ, ಎಸ್ಟು ದಿನಕ್ಕೊಮ್ಮೆ, ಏನೇನು ತಪಾಸಣೆ ಮಾಡಿಸಬೇಕು ಎಂಬ ಅರಿವು ಕಡಿಮೆ. ಈ ಎಲ್ಲ ವಿಚಾರಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದೆವು.
5. CABG ಅಥವಾ angioplasty ಮಾಡಿಸಿಕೊಂಡ ಹಲವಾರು ರೋಗಿಗಳ ಮಧುಮೇಹ ಮತ್ತು ಬಿಪಿ ನಿಯಂತ್ರಣದಲ್ಲಿ ಇಲ್ಲ. ಹೃದಯಾಘಾತ ಚಿಕಿತ್ಸೆ ಪಡೆಯುತ್ತಾ ಇದ್ದ ವ್ಯಕ್ತಿಗಳ ಬಿ.ಪಿ ಮತ್ತು ಸಕ್ಕರೆ ಮಟ್ಟ ಅತೀ ಹೆಚ್ಚು ಇದ್ದಿದ್ದು ಕಂಡು ಬಂದಿತು.
7. “250-300 ಶುಗರ್ ನಾರ್ಮಲ್” ಎಂದು ಅನೇಕರು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ. ನಮಗೆ ಏನು ಸಮಸ್ಯೆ ಇಲ್ಲ. ನಮಗೆ ಯಾವುದು ಮಾತ್ರೆ ಬೇಡ ಅನ್ನೋ ಅಭಿಪ್ರಾಯ ಹಲವಾರು ಜನರದ್ದು ಆಗಿತ್ತು. ಈ ಎಲ್ಲದರ ಬಗ್ಗೆ ಅರಿವು ಮೂಡಿಸಲು ಪ್ರಯತ್ನ ಮಾಡಲಾಯಿತು.
8. ಇನ್ಸುಲಿನ್ ಕುರಿತು ಭಯ, ಅಪಸ್ವರಗಳು ಇದೆ. ಆದರೆ ಇನ್ಸುಲಿನ್ ನಿಯಂತ್ರಣಕ್ಕೆ ಅತ್ಯುತ್ತಮ ವಿಧಾನವಾಗಿದೆ ಎಂಬುದು ತಿಳಿಸಲಾಯಿತು.






ಶಿಬಿರದಲ್ಲಿ 3-4 ಹೊಸ ಹೃದಯ ರೋಗಿಗಳನ್ನು ಪತ್ತೆ ಮಾಡಲಾಯಿತು. Dilated cardiomyopathy ಎನ್ನುವ 2 ಪ್ರಕರಣಗಳನ್ನು ತಕ್ಷಣ ಪತ್ತೆಹಚ್ಚಿ, ಮುಂದಿನ ಚಿಕಿತ್ಸೆಗಾಗಿ ಹೆಚ್ಚಿನ ಆಸ್ಪತ್ರೆಗಳತ್ತ ರೆಫರ್ ಮಾಡಲಾಯಿತು.
ಔಷಧ ಕಂಪನಿಗಳಿಂದ ಅಮೂಲ್ಯ ಸಹಕಾರ : Sun Pharma, Micro Labs, Mankind, Alembic, Merck, Cipla, Lupin, MSN ಕಂಪನಿಗಳು ಶಿಬಿರಕ್ಕೆ RBS, HbA1c, ಲಿಪಿಡ್ ಪ್ರೊಫೈಲ್, ನ್ಯೂರೋಪಥಿ ಸ್ಕ್ರೀನಿಂಗ್ ಸಾಧನಗಳನ್ನು ಉಚಿತವಾಗಿ ಒದಗಿಸಿ ಶಿಬಿರದ ಯಶಸ್ಸಿಗೆ ಕಾರಣರಾದರು. ಅವರ ಸಮಾಜಮುಖಿ ಸೇವೆಗೆ ನಾವು ಹೃತ್ಪೂರ್ವಕ ಧನ್ಯವಾದಗಳು ಸಲ್ಲಿಸುತ್ತೇವೆ.
ಕೊನೆಗೆ, ಬಂಕಾಪುರದಂತಹ ಪಟ್ಟಣ ಪ್ರದೇಶದಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಕಾರ್ತಿಕೇಯ ಆಸ್ಪತ್ರೆಯ ವೈದ್ಯರಾದ ಡಾ. ಬಸವರಾಜ ನರೇಗಲ್ ಮತ್ತು ಡಾ. ಅರುಣ್ ನರೇಗಲ್ ಅವರ ಸಹಕಾರಕ್ಕೆ ಧನ್ಯವಾದಗಳು.