ಉಚಿತ ಆರೋಗ್ಯ ತಪಾಸಣಾ ಶಿಬಿರ
ದಿ 30.11.2025 ರಂದು ಅಂದಲಗಿ ಗ್ರಾಮ, ಶಿಗ್ಗಾಂವಿ ತಾಲೂಕಿನಲ್ಲಿ ; ಶಿವಪ್ರಿಯ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ತಂಡವು ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದರು.ಶಿಬಿರವು 11ರಿಂದ 1 ಗಂಟೆ ವರೆಗೆ ನಡೆಸಲಾಯಿತು.
ಊರಿನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಪಾತೀಮಾಬಿ ಇ. ಜೇಕಿನಕಟ್ಟಿ, ಉಪಾಧ್ಯಕ್ಷರಾದ ಶ್ರೀಮತಿ ರತ್ನವ್ವ ಸ. ವಾಲೀಕರ , ಪಿ.ಡಿ.ಒ ಶ್ರೀ ರಾಜಶೇಖರ್ ಬ. ಹರಿಜನ್, ಕಾರ್ಯದರ್ಶಿಗಳಾದ ಶ್ರೀ ಪುಟ್ಟಪ್ಪ ಕಳ್ಳಿ ಮತ್ತು ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರಾದ ಶ್ರೀಮತಿ ಶೈಲಾ ಹಿರೇಮಠ್, ಶ್ರೀ ಶಂಬು ಹುಲಿಯಪ್ಪನವರ್, ಶ್ರೀ ಶರೀಫ ಬನ್ನೂರ್ ಮತ್ತು ಶ್ರೀ ಪ್ರವೀಣ್ ಹಿರೇಮಠ ನೇತೃತ್ವದಲ್ಲಿ ಶಿಬಿರವನ್ನು ಆರಂಭಿಸಲಾಯಿತು.
ಊರಿನ ಹಿರಿಯರಾದ ಶ್ರೀ ಗಂಗಾಧರ್ ಕುಂದುರ್, ಶ್ರೀ ಅಜ್ಜಯ್ಯ ಹಿರೇಮಠ, ಶ್ರೀ ಶಿವಪುತ್ರಪ್ಪ ಜವಳಿ, ಶ್ರೀ ಸುಭಾಷ್ ಹೋತನಹಳ್ಳಿ, ಶ್ರೀ ರಾಮಣ್ಣ ಸನ್ಮನಿ, ಶ್ರೀ ಬಸವೇಂದ್ರ ಹಿರೇಮಠ, ಶ್ರೀ ಎಲ್ಲಪ್ಪ ವಾಲಿಕಾರ್, ಶ್ರೀ ಎಲ್ಲಪ್ಪ ಶಿರೂರು, ಶ್ರೀ ನಾಗನಗೌಡ ಪಾಟೀಲ್ ಮತ್ತು ಶ್ರೀ ಶಂಕ್ರಯ್ಯ ಹಿರೇಮಠರವರು ಭಾಗಿಯಾಗಿದ್ದರು.
ಗ್ರಾಮದ ಹಿರಿಯರ ಸಮ್ಮುಖದಲ್ಲಿ ತಪಾಸಣೆಯನ್ನು ಊರಿನ ಗ್ರಾಮ ದೇವಿ ಸಮುದಾಯ ಭವನದಲ್ಲಿ ನಡೆಸಲಾಯಿತು.
ಶಿಬಿರದಲ್ಲಿ 80-85 ರೋಗಿಗಳ ತಪಾಸಣೆ ನಡೆಸಲಾಯಿತು.
ಭಾಗಿಯಾದವರಲ್ಲಿ ಹೊಸದಾಗಿ ಪತ್ತೆಹಚ್ಚಿದ್ದು ಸಕ್ಕರೆ ಖಾಯಿಲೆ, ಹೆಚ್ಚಿನ ಮಟ್ಟದಲ್ಲಿ ಬಿ. ಪಿ ಮತ್ತು ರಕ್ತ ಹೀನತೆ.
ಎಷ್ಟೊ ವೃದ್ಧರಲ್ಲಿ ಸಕ್ಕರೆ ಅಂಶವು 300 - 400mg/dL ಕಂಡುಬಂದವು. ಕೆಲವೊಬ್ಬರಲ್ಲಿ ಬಿ. ಪಿ 180 ಗೆ 200 SBP ವರೆಗೂ ಇದ್ದಿದ್ದು ಉಂಟು.
ಮೊಣಕಾಲು ನೋವು, ಬೆನ್ನು ನೋವು, ನರ ರೋಗ ಮತ್ತು ಬೆನ್ನು ಹುರಿ ಸಮಸ್ಯೆ ಕೂಡ ಹೆಚ್ಚಿನ ಪ್ರಮಾಣದಲ್ಲಿ ತಪಾಸಣೆ ಮಾಡಲಾಯಿತು.
ರಕ್ತಹೀನತೆ ಹೆಣ್ಣುಮಕ್ಕಳಲ್ಲಿ , ವೃದ್ಧರಲ್ಲಿ ಮತ್ತು ಶಾಲೆ ಮಕ್ಕಳಲ್ಲಿ ಕಂಡುಬಂತು.
ಕಜ್ಜಿ, ಇಸುಬು, ಸಿ.ಓ.ಪಿ.ಡಿ, ನರ ರೋಗ ಸಮಸ್ಯೆ, ಹೃದಯ ಸಮಸ್ಯೆ ಕೂಡ ಪತ್ತೆ ಹಚ್ಚಲಾಯಿತು.
ಡಾ. ಮೃತ್ಯುಂಜಯ ಬಟ್ಟೂರ (ಎಲುಬು, ಕೀಲು ಮತ್ತು ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ತಜ್ಞರು) ಮತ್ತು ಡಾ. ಚೇತನ್ ಗಂಟೆಪ್ಪನವರ (ಮಧುಮೇಹ , ರಕ್ತದೊತ್ತಡ ಮತ್ತು ಹೃದಯ ರೋಗ ತಜ್ಞರು) ಇವರ ನೇತೃತ್ವದಲ್ಲಿ ಹಲವಾರು ರೋಗಿಗಳಿಗೆ ಚಿಕಿತ್ಸೆಗೆ ನೀಡಲಾಯಿತು. ತೊಂದರೆ ಹೆಚ್ಚು ಇದ್ದಲ್ಲಿ ಮತ್ತು ಗಂಭೀರ ಇದ್ದಲ್ಲಿ ಹೆಚ್ಚಿನ ತಪಾಸಣೆಗೆ ಮತ್ತು ಚಿಕಿತ್ಸೆಗೆ ಸೂಕ್ತ ಮಾರ್ಗದರ್ಶನ ನೀಡಿದರು.
ನಮ್ಮ ಶಿಬಿರದಲ್ಲಿ ಊರಿನ ವೈದ್ಯರಾದ ಡಾ. ಶಂಕ್ರಪ್ಪ ಹುಲಿಯಪ್ಪನವರ ಅವರು ಕೂಡ ಭಾಗವಹಿಸಿ ಶಿಬಿರವನ್ನು ಯಶಸ್ವಿ ಮಾಡಲು ಸಹಾಯ ಮಾಡಿದರು.
ಅಂದಲಗಿ ಗ್ರಾಮದ ಶ್ರೀ ಮುಲ್ಲಾಸಾಬ್ ಜಕ್ಕನಕಟ್ಟಿ , ಶ್ರೀ ಕೃಷ್ಣಪ್ಪ ವಡ್ಡರ್, ಶ್ರೀ ಖಾಜಾಸಾಬ್ ಗುಡ್ಡದ, ಶ್ರೀ ಅಬ್ದುಲ್ ಗಣಿ ಯಡಹಳ್ಳಿ, ಶ್ರೀ ಕಲ್ಲಪ್ಪ ಹಡಪದ, ಶ್ರೀಮತಿ ಹೇಮವ್ವ ಹಡಪದ, ಶ್ರೀ ಈರವ್ವ ಹಿರೇಮಠ, ಶ್ರೀಮತಿ ಪ್ರಭಾವತಿ ಕ್ಯಾಲಕೊಂಡ, ಶ್ರೀಮತಿ ಎಲ್ಲವ್ವ ಹೂಗಾರ್ ಮತ್ತು ಅಕ್ಕಮ್ಮ ಹಿರೇಮಠ ಮತ್ತು ಇತರೆ ವ್ಯಕ್ತಿಗಳು ಶಿಬಿರದ ಫಲಾನುಭವಿಗಳು.
ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಅವಕಾಶ ನೀಡಿದ ಊರಿನ ಮುಖ್ಯಸ್ಥರು, ಹಿರಿಯ ಮುಖಂಡರು , ವೈದ್ಯರಾದ ಡಾ.ಶಂಕರಪ್ಪ ಹುಲಿಯಪ್ಪನವರ ಮತ್ತು ಗ್ರಾಮದ ಸದಸ್ಯರಿಗೆ ಶಿವಪ್ರಿಯ ಆಸ್ಪತ್ರೆಯ ತಂಡದಿಂದ ಧನ್ಯವಾದಗಳು.
ಶಿಗ್ಗಾಂವಿ ನಗರದ ಶಿವಪ್ರಿಯ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಅಡಿಯಲ್ಲಿ ಹೊರರೋಗಿ, ಒಳ ರೋಗಿ, ಶಸ್ತ್ರ ಚಿಕಿತ್ಸೆ, ಆಪರೇಶನ್ ಥಿಯೇಟರ್, X - ray (ಎಕ್ಸ್ ರೇ ), ರಕ್ತ ತಪಾಸಣಾ ಲ್ಯಾಬೋರೇಟರಿ, ಔಷಧಾಲಯ ಸೌಲಭ್ಯ ಲಭ್ಯವಿದೆ. ಹೆಚ್ಚಿನ ಚಿಕಿತ್ಸೆ ಮತ್ತು ತಪಾಸಣೆಗೆ ಭೇಟಿ ನೀಡಿ.



ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರು -
1. ಡಾ. ಮೃತ್ಯುಂಜಯ ಬಟ್ಟೂರು - ಎಲುಬು, ಕೀಲು ಮತ್ತು ಬೆನ್ನು ಹುರಿ ಶಸ್ತ್ರ ಚಿಕಿತ್ಸೆ ತಜ್ಞರು
2. ಡಾ. ಚೇತನ್ ಗಂಟೆಪ್ಪನವರ - ಮಧುಮೇಹ, ಹೃದಯರೋಗ, ಥೈರಾಯಿಡ್ ಮತ್ತು ರಕ್ತದೊತ್ತಡ ಸಮಸ್ಯೆ ತಜ್ಞರು
3. ಡಾ. ಸಂತೋಷಕುಮಾರ ದೊಡಮನಿ - ಶಸ್ತ್ರ ಚಿಕಿತ್ಸೆ ಮತ್ತು ಲ್ಯಾಪರೊಸ್ಕೋಪಿಕ್ ಸರ್ಜನ್
4. ಡಾ. ನಮಿತಾ ತುಂಬಾಳ - ಚರ್ಮ ರೋಗ ತಜ್ಞರು
5. ಡಾ. ಸಾಜಿಯ ನದಾಫ - ಚಿಕ್ಕ ಮಕ್ಕಳ ತಜ್ಞರು
6. ಡಾ. ಸಚಿನ್ ಶೆಟ್ಟೆಪ್ಪನವರ್ - ಎಲುಬು ಮತ್ತು ಕೀಲು ತಜ್ಞರು

ರಿಸೆಪ್ಷನ್/ Reception - 8147256452
ಹೆಚ್ಚಿನ ಸಂಪರ್ಕ -
1. ಬಸವರಾಜ ಗಡ್ಡದ - 7795166729
2. ಶಿವು ಪಾಟೀಲ್ - 9980661918