Dr. Chetan Ganteppanavar
× Home About Dr. Chetan Specializations Services Gallery Blogs FAQs
Contact Us
Every Tuesday Dr. Chetan will be visiting Karthikeya Multispeciality Hospital at Bankapura from 10am - 1pm

#21 When Knowledge Saves Lives: Public CPR Training by Kalpana Multispeciality Clinic, Hubballi

#21 When Knowledge Saves Lives: Public CPR Training by Kalpana Multispeciality Clinic, Hubballi

Published
21-when-knowledge-saves-lives-public-cpr-training-by-kalpana-multispeciality-clinic-hubballi-image

ನಮ್ಮ ಭಾರತೀಯ ಪಠ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಂಬಂಧಿತ ವಿಷಯಗಳು ಕಾಣುವುದೇ ಇಲ್ಲ. ಅತಿ ಮುಖ್ಯವಾದ ಈ ಶಿಕ್ಷಣ ಇತರೆ ದೇಶಗಳಲ್ಲಿ ಸಿ.ಪಿ.ಆರ್(CPR) ಟ್ಯುಟೋರಿಯಲ್, ಬೇಸಿಕ್ ಹೆಲ್ತ್ ಎಜುಕೇಶನ್ (Basic Health Education) , ಪರ್ಸನಲ್ ಕೇರ್ (Personal Care), ಪ್ರಿವೆಂಟಿವ್ ಮೆಡಿಸಿನ್ & ಡಿಸೀಸಸ್ (Preventive Medicine & Diseases), ವ್ಯಾಕ್ಸಿನೇಷನ್ (Vaccination), ಹೆಲ್ತಿ ಲೈಫ್ ಸ್ಟೈಲ್ (Healthy Lifestyle) ಎಂದು ನಾನಾ ಹೆಸರಿನಲ್ಲಿ ಪಾಠ -ಪದ್ಯಗಳನ್ನು ನೋಡಬಹುದು. ಆದರೆ ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಈ ಒಂದು ವಿಚಾರಕ್ಕೆ ಪ್ರಾಮುಖ್ಯತೆ ಕೊಟ್ಟಿಲ್ಲ.

 

ನೀವು ನೋಡಿದಂತೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಹೃದಯಘಾತ ಸಮಸ್ಯೆಗಳು, ಶುಗರ್ ಅಥವಾ ಮಧುಮೇಹ ಸಮಸ್ಯೆಗಳು, ಬಿ.ಪಿ ಮತ್ತು ಅನಿರ್ದಿಷ್ಟ ಸಾವು ಚಿಕ್ಕ ವಯಸ್ಸಿನ ಭಾರತೀಯರಲ್ಲಿ ಕಾಣುತ್ತಿದ್ದೇವೆ . ಈಥರದ ಒಂದು ಘಟನೆ ನಮ್ಮ ಸುತ್ತಲಿನಲ್ಲಿ ನಡೆದಾಗ, ನಮಗೆ ಏನು ಮಾಡಬೇಕೆಂದು ಗೊತ್ತಿಲ್ಲ. ಭಯ ಪಡುತ್ತೀವಿ, ಸಹಾಯಕ್ಕೆ ಅತ್ತಿತ್ತ ನೋಡುತ್ತೇವೆ. ಆದರೆ ನಮಗೆ ಇದರ ಬಗ್ಗೆ ತರಬೇತಿಯೂ ಇಲ್ಲ ! ಜ್ಞಾನವು ಇಲ್ಲ!

 

 

ಈ ನಿಟ್ಟಿನಲ್ಲಿ ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್, ಹುಬ್ಬಳ್ಳಿಯ ವೈದ್ಯರಾದ ಡಾ.ಚೇತನ್ ಕೆ. ಗಂಟೆಪ್ಪನವರ್ ಮತ್ತು ಅವರ ತಂಡದ ಡಾ. ಮೃತ್ಯುಂಜಯ ಬಟ್ಟೂರ ಮತ್ತು ಡಾ. ಸಂತೋಷ ಕುಮಾರ್ ದೊಡ್ಡಮನಿ ಅವರೊಂದಿಗೆ ಕೂಡಿ ಒಂದು ಸಿ.ಪಿ.ಆರ್ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದ್ದರು. 

 

 

ಶ್ರೀ ವಿನಾಯಕ ಜೋಗರಿಶೆಟ್ಟರ್ (Shri Vinayak Jogarishettar) ಮತ್ತು ಅವರ ಎನ್.ಜಿ.ಒ ಸಂಸ್ಥೆ ರೆವಲ್ಯೂಷನ್ ಮೈಂಡ್ಸ್ (NGO - Revolution Minds) ಹಾಗೂ ಫಾರ್ಮಾ ಸಂಸ್ಥೆಗಳಾದ ಸನ್ ಫಾರ್ಮ (Sun Pharma) & ಯು.ಎಸ್.ವಿ (USV Pharma) ನಮಗೆ ಮ್ಯಾನಿಕ್ವೀನ್ (MANNEQUIN - Dolls for teaching) ಗಳನ್ನು ನೀಡಿದರು. ಇವರೆಲ್ಲರ ಸಹಾಯದಿಂದ ಶಿಬಿರ ಯಶಸ್ವಿಯನ್ನು ಕಂಡಿತು.

 

  • ನಮ್ಮಲ್ಲಿ ಎಷ್ಟು ಜನಕ್ಕೆ ಗೊತ್ತು ಸಿ.ಪಿ.ಆರ್ ಎಂದರೇನು ಅಂತ ? 
  • ಸಿ.ಪಿ.ಆರ್ ಯಾರಿಗೆ ಮಾಡಬೇಕು ? 
  • ಸಿ.ಪಿ.ಆರ್ ಹೇಗೆ ಮಾಡಬೇಕು ? 
  • ಸಿ.ಪಿ.ಆರ್ ಎಷ್ಟೊತ್ತು ಮಾಡಬೇಕು ಅನ್ನೋದು ?

 

ಈ ಒಂದು ಶೈಕ್ಷಣಿಕ ಚಟುವಟಿಕೆಯಲ್ಲಿ ನಾವು ಕಾಲೇಜ್ ವಿದ್ಯಾರ್ಥಿ ಮತ್ತು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 8 ರಿಂದ 10 ವ್ಯಕ್ತಿ ಗಳಿಗೆ ತರಬೇತಿ ನೀಡಿದವು. ಫಾರ್ಮಾ ಸಂಸ್ಥೆಗಳು ಕೊಟ್ಟಿರುವ ಮೂರು ಮೆನೆಕ್ವೀನ್ ಸಹಾಯದಿಂದ ಟ್ರೈನಿಂಗ್ ಶಿಬಿರ ಸುಮಾರು ಒಂದುವರೆ ಗಂಟೆಗಳ ಕಾಲ ನಡೆಯಿತು. ಶಿಕ್ಷಣ ಪಡೆದ ಎಲ್ಲರೂ ತಮ್ಮಲ್ಲಿದ್ದ ಸಂಶಯಗಳನ್ನು ಬಗೆಹರಿಸಿಕೊಂಡರು. ಹೊಸ ವಿಷಯವನ್ನು ಕಲಿತು ಭಯವನ್ನು ದೂರಪಡಿಸಿ, ಜೀವವನ್ನು ರಕ್ಷಿಸಲು ಸಿದ್ಧರಾದರು.

 

ಸಿ.ಪಿ.ಆರ್ ಎಂದರೆ ಕಾರ್ಡಿಯೋ-ಪಲ್ಮನರಿ ರಿಸಸಿಟೇಶನ್. ನಿಂತು ಹೋದ ಹೃದಯವನ್ನು ಮತ್ತೆ ಶುರು ಮಾಡುವ ಪ್ರಕ್ರಿಯೆ ಹಾಗೂ ಕೃತಕ ಉಸಿರನ್ನು ಕೊಡುವ ವಿಧಾನ. 

 

TUTORIAL LIVE SESSION VIDEO : https://youtube.com/shorts/r3Dn9o3iMrM

 

ಇದನ್ನು ನಾವು ಯಾರಿಗೆ ಮಾಡುತ್ತೇವೆ ಅಂದರೆ ಯಾರು ಎಬ್ಬಿಸಿದರೆ ಎದ್ದು ಏಳುವುದಿಲ್ಲ ಅಂಥವರು, ಅವರ ನಾಡಿ ಬಡಿತ ನಿಂತಿರುತ್ತೆ. ಸಿ.ಪಿ.ಆರ್ ಅಲ್ಲಿ ವ್ಯಕ್ತಿಯ ಎದೆಯನ್ನು ಒಂದು ನಿಮಿಷಕ್ಕೆ 100 ರಿಂದ 120 ಬಾರಿ ಒತ್ತಬೇಕು, ಹಾಗೂ ಪ್ರತಿ 30 ಸೆಕೆಂಡಿಗೆ ಬಾಯಿಂದ - ಬಾಯಿಗೆ ಕೃತಕ ಉಸಿರು ಕೊಡಬೇಕು. 

 

ಸಿ.ಪಿ.ಆರ್ ವಿಡಿಯೋಗಳನ್ನು ನಾವು ಇತ್ತೀಚಿಗೆ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೋಡುತ್ತೇವೆ. ಯಾವುದೋ ವ್ಯಕ್ತಿ ಬ್ಯಾಂಕಲ್ಲಿ ಆಗಲಿ, ಬಸ್ಸಲ್ಲಿ, ರಸ್ತೆಯಲ್ಲಿ, ನೃತ್ಯ ಸ್ಪರ್ಧೆ, ಟ್ರೈನ್ ನಲ್ಲಿ, ಕುಸಿದು ಬೀಳುತ್ತಾನೆ. ಅಲ್ಲಿರುವ ಯಾವುದೋ ಒಬ್ಬ ; ಸಿ.ಪಿ.ಆರ್ ಗೊತ್ತಿರುವ ವ್ಯಕ್ತಿ ಅವನನ್ನು ರಕ್ಷಿಸಿ ಎಚ್ಚರಗೊಳಿಸುತ್ತಾನೆ. CPR ತಪ್ಪು ವಿಧಾನ ಮಾಡಿದರೆ ? ಜೀವಕ್ಕೆ ಏನಾದ್ರೂ ಅಪಾಯವಾದರೆ ? ಈ ಒಂದು ಭಯದಲ್ಲಿ ನಾವು ಸುಮ್ಮನೆ ನಿಂತು ಬಿಡುತ್ತೇವೆ. ಅಂತ ಶಿಕ್ಷಣ ಹೊಂದಿದ ವ್ಯಕ್ತಿಗಳಲ್ಲಿ ನೀವು ಒಬ್ಬರಾಗಬೇಕು ಎನ್ನುವುದು ನಮ್ಮ ಆಶಯ.   

 

ನಿಮಗೂ ಕೂಡ ಸಿ.ಪಿ.ಆರ್ ಕಲಿಯಬೇಕು ಅಥವಾ ಸಿ.ಪಿ.ಆರ್ ಬಗ್ಗೆ ತರಬೇತಿ ಬೇಕು ಎಂದಲ್ಲಿ ಕಲ್ಪನಾ ಕ್ಲಿನಿಕ್ ನ ವೈದ್ಯ ತಂಡಕ್ಕೆ ನಿಮ್ಮ ಕಾಲೇಜ್ ಅಥವಾ ಸಂಸ್ಥೆಯ ವತಿಯಿಂದ ಒಂದು ಮನವಿ ಪತ್ರವನ್ನು ಕಳಿಸಿಕೊಡಿ. ನಾವು ನಮ್ಮ ಸಂಸ್ಥೆಯ ವತಿಯಿಂದ ನಿಮಗೆ ತರಬೇತಿ ನೀಡಲು ಯಾವಾಗಲೂ ಸಿದ್ಧ.

ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್ ನ ವೈದ್ಯರ ತಂಡ, ಸಮಾಜಕ್ಕೆ ಒಂದು ಉತ್ತಮ ಶಿಕ್ಷಣ ಹಾಗೂ ಆರೋಗ್ಯವನ್ನು ನೀಡಲು ಸದಾ ಸಿದ್ಧ.

 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಲ್ಪನಾ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್, ಕಾಳಿದಾಸ ನಗರ, ಹುಬ್ಬಳ್ಳಿ. Mob : 814-714-8724

Tags : CPR CAMP,
Emergency